Siddaramaiah : ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ : ಗೃಹ ಸಚಿವರಿಗೆ ಸಿದ್ದು ಸವಾಲು!
ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡಿಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ,ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸವಾಲೆಸೆದಿದ್ದಾರೆ.
ಬೆಂಗಳೂರು : ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡಿಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸವಾಲೆಸೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು (ಅಶ್ವತ್ ನಾರಾಯಣ)ಆಡು ಭಾಷೆಯಲ್ಲಿ ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನೂ ಓದಿ : ಖಾಸಗಿ ಸ್ಲೀಪರ್ ಬಸ್'ಗಳಿಗೆ ಸೆಡ್ಡು ಹೊಡೆಯಲು ರಸ್ತೆಗಿಳಿದ KSRTC ಐಶಾರಾಮಿ ಬಸ್!
ಜ್ಞಾನೇಂದ್ರ ಹೇಳಿಕೆಗೆ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು,ಸೈದ್ಧಾಂತಿಕ ದಿವಾಳಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ದುರ್ಬಲ ಗೃಹ ಸಚಿವರು ಇದ್ದಾರೆ, ಎಂದರು.
ಮಧ್ಯಪ್ರವೇಶಿಸಿದ ಜಾನೇಂದ್ರ,ನಾನು ಚಾಲೆಂಜ್ ಮಾಡ್ತೆನೆ, ನಿಮಗಿಂತ ಆಡಳಿತ ಚೆನ್ನಾಗಿ ಮಾಡಿದ್ದೇನೆ ಚರ್ಚೆ ಮಾಡೋಣ,೨೦೧೭ ರಲ್ಲಿ ೩೭ ಸಾವಿರ ರೌಡಿ ಸೀಟ್ ಓಪನ್ ಮಾಡಿದ್ರಿ.ಅದರಲ್ಲಿ ಗೊತ್ತಾಗುತ್ತೆ ರೌಡಿ ರಾಜ್ಯ ನಡೆಸಿದ್ರಿ, ಎಂದು ವಾಗ್ದಾಳಿ ನಡೆಸಿದರು.ನಂತರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ರೌಡಿಗಳ ಮಟ್ಟ ಹಾಕಲು ಕೇಸ್ ಹಾಕಿದ್ದು, ಎಂದರು.
ಬಜೆಟ್ ಮೇಲೆ ಚರ್ಚೆ ಮುಖ್ಯಮಂತ್ರಿ ಹಾಗೂ ಶಾಸಕರ ಗೈರು : ಸಿದ್ದು ಗರಂ!
ಇನ್ನು ಬಜೆಟ್ ಕುರಿತು ಚರ್ಚೆ ನಡೆಸುವ ಹಿನ್ನಲೆ ಹಣಕಾಸಿನ ಖಾತೆ, ಮುಖ್ಯಮಂತ್ರಿ ಬಳಿ ಇರುವ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಕಲಾಪಕ್ಕೆ ಗೈರಾಗಿದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಮಾತನಾಡುವಾಗ ಸಿಎಂ ಇರಬೇಕು, ಯಾರು ಇಲ್ಲ ಅಂದ್ರೆ ಹೇಗೆ, ಬಜೆಟ್ ಅಧಿವೇಶನ ಯಾಕೆ ಕರೆದಿದ್ದೀರ?ಕೇವಲ ಆರಗ ಜ್ಞಾನೇಂದ್ರ ಮಾತ್ರ ಇದ್ದಾರೆ.ಬಜೆಟ್ ಓದಿದ್ದಿರಾ ಎಂದು ಆರಗ ಅವರಿಗೆ ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ,ನಾನು ಬಜೆಟ್ ಓದಿದ್ದೇನೆ, ಮಂಡನೆ ವೇಳೆ ಕೂಡ ಇದ್ದೆ.ಏನು ಮಾಡೋಣ ನಮ್ಮ ಕಾಲದಲ್ಲಿ ಇದ್ದ ಅಧಿಕಾರುಗಳು ಈಗಲೂ ಇದ್ದಾರೆ. ಬಜೆಟ್ ತಾಯರಿ ಮಾಡಿ ಕೊಡ್ತಾರೆ, ಅದೆ ಪ್ರಾಬ್ಲಂ ಆಗಿರೋದು ಈಗ. ಮಂತ್ರಿಗಳ ಜೊತೆ ಸಭೆ ಮಾಡಿ ಬಜೆಟ್ ತಯಾರಿ ಮಾಡಬೇಕು ಎಂದರು.
ಇದಕ್ಕೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ,ನನಗೆ ಮಾತನಾಡಲು ಹುಮ್ಮಸ್ಸು ಹೊಯ್ತು ಯಡಿಯೂರಪ್ಪ ಮತ್ತು ಶೆಟ್ಟರ್ ಇದ್ದಾರೆ, ನೀವು ಸಚಿವರು ಮತ್ತು ಸಿಎಂ ಕಿವಿ ಹಿಂಡಬೇಕಲ್ವಾ ಅಂತ ಸಿದ್ದರಾಮಯ್ಯ ಸಲಹೆ ನೀಡಿದರು. ಯಾರಿಗೆ ನನ್ನ ಭಾಷಣ ಮಾಡಲಿ, ಸಿಎಂ ಕೂಡ ಸದನದಲ್ಲಿ ಹಾಜರಾಗಿಲ್ಲ. ನನ್ನ ಚರ್ಚೆಗೆ ಉತ್ತರ ಕೊಡೋದು ಯಾರು? ಸ್ಪೀಕರ್ ಸರಿಯಾಗಿ ಕಿವಿ ಹಿಂಡೋದಿಲ್ಲ ಅಂತ ಕಾಂಗ್ರೆಸ್ ನಾಯಕರ ಆಕ್ರೋಶ ಹೊರಹಾಕಿದರು. ಯಡಿಯೂರಪ್ಪ ಅವರು ದಿನನಿತ್ಯ ಕೂರ್ತಾರೆ. ಅವರನ್ನ ನೋಡಿ ಇವರೆಲ್ಲಾ ಕಲಿಯಲಿ ಎಂದು ಸಿದ್ದರಾಮಯ್ಯ ಹೇಳಿದರು.
ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಸಿಎಂ ಹಾಸನಕ್ಕೆ ಹೋಗಿದ್ದಾರೆ. ನನಗೆ ಪತ್ರ ಕೊಟ್ಟು, ಹೇಳಿಯೇ ಹೋಗಿದ್ದಾರೆ. ಸಚಿವರು ಬರ್ತಾರೆ ಮಾತಾಡಿ,ಈಗ ಇರೋ ಸಚಿವರು ಕೇಳಿಸಿಕೊಳ್ತಿದ್ದಾರೆ ಎಂದರು.
ಮೊದಲಿಗೆ ಬಜೆಟ್ ಕುರಿತ ಚರ್ಚೆ ಮಾಡುವ ಸಂದರ್ಭದಲ್ಲಿ, ಸಿದ್ದರಾಮಯ್ಯ, ಎಸಿಬಿ 14 ರಾಜ್ಯದಲ್ಲಿ ಇದೆ, ಇದನ್ನು ನಾನು ಹೇಳಿಲ್ಲ.ನಿಮ್ಮ ಅಡ್ವಕೇಟ್ ಜನರಲ್ ಹೇಳಿದ್ದಾರೆ.ನನ್ನ ಮೇಲಿನ ಆರೋಪ ಮುಚ್ಚಿಹಾಕುಲು ಎಸಿಬಿ ಮಾಡಿದೆ ಎಂದು ಆರೋಪ ಮಾಡಿದ್ದೀರ, ಇದು ಸುಳ್ಳು.ಲೋಕಾಯುಕ್ತ ಮುಚ್ಚಿದೆ ಅಂತ ಆರೋಪ ಮಾಡಿದ್ದಾರೆ, ಇದು ಸುಳ್ಳು.ನನ್ನ ಮೇಲೆ ಹಲವು ಆರೋಪಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ, ಎಂದರು.
ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ, ನೀವು ಲೋಕಾಯುಕ್ತ ರದ್ದುಪಡಿಸಿ, ಎಸಿಬಿ ರಚನೆ ಮಾಡಿದ್ರಿ ಅಂತ ಸುಪ್ರೀಂ ಕೋರ್ಟಿಗೆ ನಾವು ಹೇಳೋಕೆ ಆಗುತ್ತಾ? ಎಂದರು.
ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ,ಅಡ್ವೋಕೇಟ್ ಜನರಲ್ ಹೇಳಿದ್ರೆ, ಸರ್ಕಾರ ಹೇಳಿದಂತೆ.ಸಿದ್ದರಾಮಯ್ಯ ಮುಚ್ಚಿದ್ರು ಅಂತ ಆರೋಪ ಮಾಡ್ತೀರಾ.?ಲೋಕಾಯುಕ್ತ ಮುಚ್ಚಬೇಕು ಅನ್ನೋದು ನಮ್ಮ ಉದ್ದೇಶ ಇರಲಿಲ್ಲ, ಎಂದು ತಿಳಿಸಿದರು.
ಇದನ್ನೂ ಓದಿ : ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರಾ ಹೆಚ್ ಡಿಕೆ? ಏನಿದೆ ಜೆಡಿಎಸ್ ಲೆಕ್ಕಾಚಾರ ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.